ಬಿಗ್ ಬಾಸ್ ಕನ್ನಡ ಸೀಸನ್ 5 : ವೀಕ್ಷಕರು ಬಾರಿ ಗರಂ, ಕಾಮೆಂಟ್ ಗಳ ಸುರಿಮಳೆ

Filmibeat Kannada 2017-10-26

Views 1.3K

ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಅಪಾರ ಸಾಧನೆ ಮಾಡಿದ್ದೇವೆ. ಹೀಗಾಗಿ ಎಲ್ಲರೂ ನನಗೆ ಮರ್ಯಾದೆ ಕೊಡಲೇಬೇಕು. ನಾನು ಹೇಳಿದ್ದೇ ವೇದ ವಾಕ್ಯ, ನನ್ನ ಅಭಿಮಾನಿಗಳು ನನ್ನನ್ನ ಸಪೋರ್ಟ್ ಮಾಡೇ ಮಾಡ್ತಾರೆ'' ಎಂಬ ಕುರುಡು ನಂಬಿಕೆ ಮೇಲೆ 'ಬಿಗ್ ಬಾಸ್' ಮನೆಯೊಳಗೆ ಹೋಗಿ, ಅಲ್ಲಿ ಬೇಕಾ ಬಿಟ್ಟಿ ನಡೆದುಕೊಂಡ್ರೆ, ವೀಕ್ಷಕರು ಖಂಡಿತವಾಗಿಯೂ ಸಪೋರ್ಟ್ ಮಾಡಲ್ಲ.! 'ಪಬ್ಲಿಕ್ ಮೆಮೊರಿ ಈಸ್ ವೆರಿ ಶಾರ್ಟ್' ಎಂಬ ಮಾತಿನಂತೆ ಜನಸಾಮಾನ್ಯರ ಜ್ಞಾಪಕ ಶಕ್ತಿ ತುಂಬಾ ಕಮ್ಮಿ ಇರಬಹುದು. ಹಾಗಂತ, ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವುದಿಲ್ಲ ಎಂದರ್ಥ ಅಲ್ಲ.! ಕಿರುತೆರೆ ಆಗಲಿ, ಬೆಳ್ಳಿತೆರೆ ಆಗಲಿ... ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ತಾಕತ್ತು ವೀಕ್ಷಕರಿಗಿದೆ. ಬಿಗ್ ಬಾಸ್' ಮನೆಯಲ್ಲೂ ಅಷ್ಟೇ... ''ಅಡುಗೆ ಮನೆ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುವವರು ನಾನು ಹೇಳಿದ ಹಾಗೆ ಕೇಳಬೇಕು'' ಎಂದು ದಯಾಳ್ ಪದ್ಮನಾಭನ್ ಹೇಳಿದ್ದು, ಅಲ್ಲಿಂದ ಜಗಳ ಸಮೀರಾಚಾರ್ಯ, ದಿವಾಕರ್ ಹಾಗೂ ರಿಯಾಝ್ ಸುತ್ತ ಸುತ್ತುಕೊಂಡಿದ್ದು.
Bigg Boss Kannada 5: Week 2: Viewers lashes out against celebrity contestants. Big Boss viewers are furious against celebrities. Viewers comments on colors page & their observation is very deep about Big Boss programme.

Share This Video


Download

  
Report form
RELATED VIDEOS