Bigg Boss Kannada Season 5 : ಸ್ಪರ್ಧಿಗಳಿಗೆ ಡಬಲ್ ಎಲಿಮಿನೇಷನ್ ಶಾಕ್ ಕೊಟ್ಟ ಸುದೀಪ್ | Filmibeat Kannada

Filmibeat Kannada 2017-11-27

Views 772

ರಿಯಾಝ್ ಔಟ್, ಅನುಪಮಾಗೆ ಶಾಕ್: ಇದು ಸುದೀಪ್ 'ಡ್ರಾಮಾ'.! 'ಬಿಗ್ ಬಾಸ್ ಕನ್ನಡ-5' ವೀಕ್ಷಕರಿಗೆ ಈಗಾಗಲೇ ಗೊತ್ತಿರುವ ಹಾಗೆ, ಆರನೇ ವಾರ ಎಲಿಮಿನೇಷನ್ ಇರಲಿಲ್ಲ. ನಾಮಕಾವಸ್ತೆಗೆ ನಾಮಿನೇಷನ್ ಪ್ರಕ್ರಿಯೆ ನಡೆದರೂ, ಈ ವಾರ 'ಬಿಗ್ ಬಾಸ್' ಮನೆಯಿಂದ ಯಾರೂ ಔಟ್ ಆಗಲ್ಲ ಎಂಬ ಸಂಗತಿ 'ಕಲರ್ಸ್ ಸೂಪರ್' ವೀಕ್ಷಕರಿಗೆ ಗೊತ್ತಿತ್ತು. ಆದ್ರೆ, ಈ ಸತ್ಯ 'ಬಿಗ್ ಬಾಸ್' ಸ್ಪರ್ಧಿಗಳಿಗೆ ತಿಳಿದಿರಲಿಲ್ಲ. ಐದು ವಾರಗಳಲ್ಲಿ ನಡೆದ ಹಾಗೆ, ಈ ವಾರವೂ ಒಬ್ಬರು ಹೊರಗೆ ಹೋಗುತ್ತಾರೆ ಎಂಬ ಮನಸ್ಥಿತಿಯಲ್ಲಿಯೇ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳಿದ್ದರು. ಹೀಗಿರುವಾಗಲೇ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುದೀಪ್, ಈ ವಾರ 'ಡಬಲ್ ಎಲಿಮಿನೇಷನ್' ಇದೆ ಎಂದು ಸ್ಪರ್ಧಿಗಳಿಗೆಲ್ಲ ಶಾಕ್ ನೀಡಿ 'ಡ್ರಾಮಾ' ಆರಂಭಿಸಿದರು. ವೇದಿಕೆ ಮೇಲೆ ಎಂಟ್ರಿಕೊಡುತ್ತಿದ್ದಂತೆಯೇ, ಈ ವಾರ ''ಡಬಲ್ ಎಲಿಮಿನೇಷನ್ ಇದೆ'' ಎಂದು ಸ್ಪರ್ಧಿಗಳಿಗೆಲ್ಲ ಕಿಚ್ಚ ಸುದೀಪ್ ಶಾಕ್ ನೀಡಿದರು.

Share This Video


Download

  
Report form
RELATED VIDEOS