'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐವತ್ತು ದಿನಗಳು... ಅಂದ್ರೆ ಏಳು ವಾರಗಳು ಕಳೆದ್ಮೇಲೆ ಮನೆಯ ಕ್ಯಾಪ್ಟನ್ ಆಗಿ ಜಗನ್ ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ ಆಗಿ ಜಗನ್ ಆಯ್ಕೆ ಆದ ವಾರವೇ, ಇಡೀ ಮನೆ ನೇರವಾಗಿ ನಾಮಿನೇಟ್ ಆಗಿದೆ. ಜಗನ್ ಹಾಗೂ ಹೊಸ ಸ್ಪರ್ಧಿ ವೈಷ್ಣವಿ ಬಿಟ್ಟರೆ ಇನ್ನೆಲ್ಲರೂ ಡೇಂಜರ್ ಝೋನ್ ನಲ್ಲಿ ಇದ್ದಾರೆ. ಸ್ಪರ್ಧಿಗಳ ಬಗ್ಗೆ ವೀಕ್ಷಕರ ಅಭಿಪ್ರಾಯವನ್ನು ಏಕಕಾಲಕ್ಕೆ ಸಂಗ್ರಹಿಸಲು 'ಬಿಗ್ ಬಾಸ್' ಈ ನಿರ್ಣಯವನ್ನ ತೆಗೆದುಕೊಂಡು ಮನೆಯ ಎಲ್ಲ ಸದಸ್ಯರನ್ನೂ ನೇರವಾಗಿ ನಾಮಿನೇಟ್ ಮಾಡ್ಬಿಟ್ಟಿದ್ದಾರೆ.ಇಂತಹ ಸಂದರ್ಭದಲ್ಲಿ ಜಗನ್ ಕ್ಯಾಪ್ಟನ್ ಆಗಿರುವುದರಿಂದ ನಾಮಿನೇಷನ್ ನಿಂದ ಸೇಫ್ ಆಗಿದ್ದಾರೆ. ಮೊದಲೇ ಜಗನ್ ಹಾಗೂ ಅವರ ರೋಷಾವೇಷದ ಬಗ್ಗೆ ವೀಕ್ಷಕರಿಗೆ ಬೇಸರ ಇದೆ. ಮೊದಲಿನಿಂದಲೂ ಜಗನ್ ಔಟ್ ಆಗಬೇಕು ಅಂತ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ. ಅಂಥದ್ರಲ್ಲಿ ಈ ವಾರ ಜಗನ್ ಸೇಫ್ ಆಗಿರುವುದು ನಿಜಕ್ಕೂ ಅದೃಷ್ಟವೇ ಸರಿ. ಇಂತಹ ಚಾನ್ಸ್ ಯಾರಿಗುಂಟು ಯಾರಿಗಿಲ್ಲ ಹೇಳಿ...
Bigg Boss Kannada 5: Week 8: Jaganath Chandrashekar turns lucky & becomes captain. This week Jagan is safe from Elimination.