ಸಿದ್ದು ಬೀಫ್ ಬಿರಿಯಾನಿ: ಬಿಜೆಪಿ, ಕಾಂಗ್ರೆಸ್ ಮತ್ತೊಂದು ಟ್ವಿಟ್ಟರ್ ವಾರ್ | Oneindia Kannada

Oneindia Kannada 2018-01-19

Views 1

ಯೋಗಿ ರೆಸಿಪಿ ಹೆಸರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಮೊದಲ ಸುತ್ತಿನ ಟ್ವಿಟ್ಟರ್ ವಾರ್, ಒಬ್ಬರು ಕಲ್ಲು ಎಸೆದರೆ, ಇನ್ನೊಬ್ಬರು ಇಟ್ಟಿಗೆ ಎಸೆದರು ಎನ್ನುವಂತಿತ್ತು. ಈಗ ಇನ್ನೊಂದು ಸುತ್ತಿನ ಟ್ವಿಟ್ಟರ್ ಯುದ್ದ ಆರಂಭವಾಗಿದ್ದು, ಒಬ್ಬರು ರೆಡ್ಡಿ,ಯೆಡ್ಡಿ, ಚಡ್ಡಿಯನ್ನು ಎಳೆದು ತಂದರೆ, ಇನ್ನೊಬ್ಬರು ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ರಮ್ಯಾ ಅವರನ್ನು ಎಳೆದು ತಂದಿದ್ದಾರೆ.

ಇಬ್ಬರೂ ದಾಖಲೆ ಸಮೇತ ಸಚಿತ್ರವಾಗಿ ವಿಡಿಯೋ ಬಿಡುಗಡೆ ಮಾಡಿದ್ದು, ಎಂದಿನಂತೆ ಒಬ್ಬರು ಇನ್ನೊಬ್ಬರ ಸರಕಾರದ ಅವಧಿಯಲ್ಲಿನ ಘಟನೆಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಟ್ವೀಟಿಗೆ ' ಕರ್ನಾಟಕಕ್ಕೆ ಬಿಎಸ್ವೈ ಕೊಡುಗೆಗಳು' ಎಂದು ಹೆಸರಿಟ್ಟಿದ್ದಾರೆ. ಯಡಿಯೂರಪ್ಪನವರ ಅವಧಿಯಲ್ಲಿನ ಹಗರಣಗಳನ್ನು ಪಟ್ಟಿಮಾಡಿ ಕಾಂಗ್ರೆಸ್ ಬುಧವಾರ (ಜ 17) ಟ್ವೀಟ್ ಮಾಡಿದೆ.

ಇದಕ್ಕೆ ಉತ್ತರವಾಗಿ ಬಿಜೆಪಿ, ಗುಂಡುರಾವ್ ಮಿಲ್ಟ್ರಿ ಹೋಟೆಲಿಗೆ ಸ್ವಾಗತ, ಸಿದ್ದು ಬೀಫ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು ಎಂದು ಹಿನ್ನಲೆ ವಿವರಣೆ ನೀಡುವ ವಿಡಿಯೋ ಹಾಕಿದೆ .
Twitter war has started in karnataka between the national political parties and twitter universe is really enjoying this cat and mouse fight between the 2 parties . Here is the latest tweet from BJP about congress

Share This Video


Download

  
Report form
RELATED VIDEOS