Minister HD Revanna visited Sphatikapuri Mahasansthan's Shakha branch in Ullal on Thursday late night. He had a discussion with Sri Nanjavadhutha Swamiji of Sri Kshetra Spatikapura, Pattanayakanahalli regarding the present situation of Karnataka politics.
ನೂತನ ಸಚಿವ ಎಚ್.ಡಿ. ರೇವಣ್ಣ ಅವರು ಪಟ್ಟನಾಯಕನಹಳ್ಳಿ ಶ್ರೀ ಸ್ಫಟಿಕಪುರಿ ಮಹಾಸಂಸ್ಥಾನದ ಶಾಖಾಮಠಕ್ಕೆ ಗುರುವಾರ ತಡರಾತ್ರಿ ಭೇಟಿ ನೀಡಿದರು. ಬೆಂಗಳೂರಿನ ಉಲ್ಲಾಳದಲ್ಲಿರುವ ಶಾಖಾಮಠಕ್ಕೆ ಬೆಂಬಲಿಗರ ಜತೆ ತೆರಳಿದ ರೇವಣ್ಣ, ಶ್ರೀ ನಂಜಾವಧೂತ ಸ್ವಾಮೀಜಿ ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಸಮಯ ಗೋಪ್ಯ ಮಾತುಕತೆ ನಡೆಸಿದರು.