ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಜನಪ್ರಿಯ ಕ್ಲಾಸಿಕ್ 350 ಮಾದರಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿ ವಿತರಣೆ ಆರಂಭಿಸಿದ್ದು, ಹೊಸ ಬೈಕ್ ಮಾದರಿಗಾಗಿ ಕಂಪನಿಯು ಹಲವಾರು ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಪ್ರಕಟಿಸಿದೆ. ಕಂಪನಿಯು ಪ್ರಕಟಿಸಿರುವ ಕ್ಲಾಸಿಕ್ 350 ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿರುವ ಸೌಲಭ್ಯಗಳನ್ನು ಕಂಪನಿಯ 'ಮೇಕ್ಇಟ್‌ಯುವರ್ಸ್' ಮೂಲಕ ಗ್ರಾಹಕರು ಆನ್‌ಲೈನ್ ಕಾನ್ಫಿಗೇಷನ್ ಮಾಡಿಕೊಳ್ಳುವ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ. ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಎಂಜಿನ್ ಗಾರ್ಡ್, ವಿಂಡ್ ಶೀಲ್ಡ್, ಟೂರರ್ ಮಿರರ್, ಸಿಲ್ವರ್ ಸಂಪ್ ಗಾರ್ಡ್, ಸಿಲ್ವರ್ ಫುಟ್‌ಪೆಗ್, ಬ್ಲಾಕ್ ವಾಟರ್‌ಪ್ರೂಫ್ ಇನ್ನರ್ ಬ್ಯಾಗ್ ಸೇರಿದಂತೆ ಪ್ರಮುಖ ಬಿಡಿಭಾಗಗಳನ್ನು ಆಕರ್ಷಕ ಬೆಲೆಯಲ್ಲಿ ಖರೀದಿಸಬಹುದಾಗಿದೆ.
#RoyalEnfield #RoyalEnfieldClassic350 #RoyalEnfieldGenuineAccessories