ಅಪ್ಪು ಅಗಲಿದ 13 ದಿನಗಳ ಬಳಿಕ ರಜನಿ ಸಂತಾಪ ಸೂಚಿಸಿದ್ದು,' ಪುನೀತ್ ರಾಜ್‌ಕುಮಾರ್ ನನ್ನ ಕಣ್ಣುಗಳ ಮುಂದೆ ಬೆಳೆದ ಹುಡುಗ. ಅವರು ಬಹಳ ಪ್ರತಿಭಾವಂತ ವ್ಯಕ್ತಿಯಾಗಿದ್ದರು. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಪುನೀತ್ ನಮ್ಮೊಂದಿಗೆ ಇಲ್ಲ ಅನ್ನುವುದನ್ನು ನನಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ. ಅಪ್ಪು ಅಗಲಿಕೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ' ವೆಂದು ಹೇಳಿದ್ದಾರೆ. ರಜನಿಕಾಂತ್ ಟ್ವೀಟ್ ಮೂಲಕ ಒಂದು ಸಾಲಿನಲ್ಲಿ ಸಂತಾಪ ಸೂಚಿಸಿ, ಹೂಟ್ ಲಿಂಕ್ ಶೇರ್ ಮಾಡಿದ್ದರು. ಅದರಲ್ಲೂ ಅಪ್ಪು ಅಗಲಿಕೆಯ ಬಗ್ಗೆ ಸಂತಾಪ ಸೂಚಿಸಿದ್ದರು. ಈ ಬಗ್ಗೆ ನೆಟ್ಟಿಗರು ಮಾತ್ರ ರಜನಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ
Finally Rajinikanth Express his condolence to Puneeth Rajkumar death. But fans are upset with superstar tweet.