ಹಾಸನದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಪ್ರತಿಭಟನೆ ಬಿಸಿ ತಟ್ಟಿದೆ. ಚಿಕ್ಕಮಗಳೂರಿನತ್ತ ಹೊರಟಿದ್ದ ಸಿದ್ದು ಕಾರು ಅಡ್ಡಗಟ್ಟಿ ಭಜರಂಗದಳದ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಸಕಲೇಶಪುರ ತಾಲ್ಲೂಕಿನ ಆನೆಮಹಲ್ ಬಳಿ ಸಾವರ್ಕರ್ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ್ರು. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರ ಆಕ್ರೋಶ ಹೊರಹಾಕಿದ್ರು. ದಿಢೀರ್ ಪ್ರತಿಭಟನೆಯಿಂದ ಕೆಲ ಸಮಯ ಸಿದ್ದರಾಮಯ್ಯ ಕಾರು ನಿಂತಲ್ಲೇ ನಿಂತಿತ್ತು. ಕೂಡಲೇ ಪ್ರತಿಭಟನಾಕಾರರನ್ನು ಪಕ್ಕಕ್ಕೆ ಸರಿಸಿ ಸಿದ್ದರಾಮಯ್ಯ ಮುಂದೆ ತೆರಳಲು ಪೊಲೀಸರು ಅವಕಾಶ ಮಾಡಿಕೊಟ್ರು. ನಾಳೆ ಚಿಕ್ಕಮಗಳೂರಿಗೆ ಸಿದ್ದರಾನಮಯ್ಯ ಭೇಟಿ ನೀಡಲಿದ್ದು ಗೋ ಬ್ಯಾಕ್ ಅಭಿಯಾನ ಶುರುವಾಗಿದೆ.
#publictv #siddaramaiah #hassan