ಮತ್ತೆ ಬೆಳ್ಳಿಪರದೆ ಮೇಲೆ ಕಮಾಲ್ ಮಾಡಲಿದೆಯಾ ದಚ್ಚು-ರಚ್ಚು ಜೋಡಿ? | Filmibeat Kannada

Filmibeat Kannada 2017-11-30

Views 2

ಬುಲ್ ಬುಲ್' ಸಿನಿಮಾದ ಮೂಲಕ ಕನ್ನಡ ಸಿನಿರಸಿಕರ ಮನಸ್ಸು ಕದ್ದಿರುವ ನಟಿ ರಚಿತಾ ರಾಮ್. ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ಚಿತ್ರದಿಂದಲೇ ಸ್ಯಾಂಡಲ್ ವುಡ್ ಸ್ಟಾರ್ ನಟರ ಜೊತೆ ಅಭಿನಯಿಸುವುದಕ್ಕೆ ಅವಕಾಶ ಗಿಟ್ಟಿಸಿಕೊಂಡ ಅವರು. 'ಬುಲ್ ಬುಲ್', 'ಅಂಬರೀಶ', 'ಜಗ್ಗುದಾದ' ಚಿತ್ರಗಳಲ್ಲಿ ಚಾಲೆಂಜಿಂಗ್ ಸ್ಟಾರ್ ಜೊತೆ ಕಾಣಿಸಿಕೊಂಡಿದ್ದ ರಚಿತಾ ಮತ್ತೆ ಇದೀಗ ದರ್ಶನ್ ಜೊತೆ ಅಭಿನಯಿಸುವುದಕ್ಕೆ ಆಯ್ಕೆಯಾಗಿದ್ದಾರೆ. ದರ್ಶನ್ ಹಾಗೂ ರಚಿತಾ ಅಭಿನಯದ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಅಭಿಮಾನಿಗಳು ಕೂಡ ಇವರಿಬ್ಬರ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಬೆಳ್ಳಿ ಪರದೆ ಮೇಲೆ ದರ್ಶನ್ ರಿಗೆ ರಚಿತಾ ರಾಮ್ ಪರ್ಫೆಕ್ಟ್ ಜೋಡಿ ಎನ್ನುವ ಮಾತು ಕೂಡ ಇದೆ. ಹೀಗಿರುವಾಗ ಈಗ ಅದೇ ಜೋಡಿ ಮತ್ತೆ ಪ್ರೇಕ್ಷಕರನ್ನು ಮೋಡಿ ಮಾಡಲು ಸಜ್ಜಾಗಿದೆ. ಮುಂದೆ ಓದಿ...ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇಬ್ಬರು ಒಂದೇ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ರಚಿತಾ ರಾಮ್ ಅವರನ್ನೇ ನಾಯಕಿಯಾಗಿ ಚಿತ್ರತಂಡ ಆಯ್ಕೆ ಮಾಡಿದೆ ಎನ್ನುವ ಸುದ್ದಿ ಗಾಂಧಿನಗರದ ತುಂಬೆಲ್ಲಾ ಹಬ್ಬಿದೆ.

Actress Rachitha Ram pair with Challenging Star Darshan which is producing by Shylaja Nag.. watch this video

Share This Video


Download

  
Report form
RELATED VIDEOS