Viral video of Karnataka PWD minister HD Revanna throwing biscuits to the Karnataka flood victims in Hassan becomes matter of debate now.
ನೆರೆಗೆ ಸಿಕ್ಕಿ ನಲುಗುತ್ತಿರುವ ಸಂತ್ರಸ್ತರಿಗೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಬಿಸ್ಕೇಟ್ ಎಸೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ನೂರಾರು ಜನ ಪ್ರವಾಹ ಸಂತ್ರಸ್ತರು ನೆರೆ ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ, ಸಾಂತ್ವನ ನೀಡಿ, ಧೈರ್ಯ ನೀಡುವುದಕ್ಕೆಂದು ತೆರಳಿದ್ದ ರೇವಣ್ಣ, ಅವರಿಗೆ ಬಿಸ್ಕೇಟ್ ಗಳನ್ನು ನೀಡುವ ಬದಲು ಎಸೆದ ಘಟನೆ ನಡೆದಿದೆ.